ISSN (Print) - 0012-9976 | ISSN (Online) - 2349-8846

ಬ್ರಿಕ್ಸ್ ಒಡಂಬಡಿಕೆಯು ಕುಸಿಯುತ್ತಿದೆಯೇ?

ಬಿ.ಆರ್.ಐ.ಸಿ.ಎಸ್ (ಬ್ರಿಕ್ಸ್) ಎಂಬುದು ಒಂದು ಗೊಂದಲಮಯ ಭೂ-ಆರ್ಥಿಕ ಪರಿಕಲ್ಪನೆಯನ್ನು ಮುಚ್ಚಿಟ್ಟುಕೊಳ್ಳಲು ಹುಟ್ಟುಹಾಕಿದ ಕೇವಲ ಅಕ್ಷರ ಜೋಡಣೆಯೇ?

 

೨೦೧೯ರ ನವಂಬರ್ ತಿಂಗಳಲ್ಲಿ ನಡೆಯಲಿರುವ ೧೧ ನೇ ಬ್ರಿಕ್ಸ್ ಶೃಂಗಸಭೆ (ಬ್ರೆಜಿಲ್, ರಷಿಯಾ, ಇಂದಿಯಾ, ಚೀನಾ, ಮತ್ತು ಸೌತ್ ಆಫ್ರಿಕಾ- ಬಿಆರ್‌ಐಸಿಎಸ್)ಯ ಚರ್ಚಾಸೂಚಿಯನ್ನು ಅಖೈರುಗೊಳಿಸಲು ಆ ದೇಶಗಳ ಸಚಿವರುಗಳ ಮಟ್ಟದ ಸಭೆಯು ೨೦೧೯ರ ಜುಲೈ ೨೮ರಂದು ಬ್ರೆಜಿಲ್‌ನ ರಿಯೋ ಡಿ ಜಿನೈರೊನಲ್ಲಿ ಸೇರಿತ್ತು. ಆದರೆ ವೆನೆಜುಯೇಲಾ ಬಿಕ್ಕಟ್ಟನ್ನು ಬಗೆಹರಿಸುವ ದಿಕ್ಕಿನ ಬಗ್ಗೆ ಆ ಸಭೆಯಲ್ಲಿ ಸದಸ್ಯರ ನಡುವೆ ಭಿನ್ನಮತ ತಲೆದೋರಿತು. ಈ ಭಿನ್ನಮತವು ಜಾಗತಿಕ ಸಹಕಾರದ ವಿಸ್ತರಣೆಯ ಯುಗದ ಮುಕ್ತಾಯವನ್ನು ಸೂಚಿಸುತ್ತಿದ್ದರೂ ವಿಜ್ನಾನ, ತಂತ್ರಜ್ನಾನ, ಅವಿಷ್ಕಾರ, ಡಿಜಿಟಲ್ ಆರ್ಥಿಕತೆ, ಭಯೋತ್ಪಾದನೆ ಮತ್ತು ಕಪ್ಪುಹಣದ ವಿರುದ್ಧದ ಸಮರಗಳಂಥ ವಿಷಯಗಳಲ್ಲಿ ಸಹಕಾರವನ್ನು ಮುಂದುವರೆಸುವ ಬಗ್ಗೆ ಸದಸ್ಯ ರಾಷ್ಟ್ರಗಳಲ್ಲಿ ಸರ್ವ ಸಮ್ಮತಿ ಏರ್ಪಡುವುದನ್ನೇನೂ ತಡೆಯಲಿಲ್ಲ. ಆದರೂ ಈ ಸಮ್ಮತಿಯು ಬ್ರಿಕ್ಸ್ ತನ್ನದೇ ಆದ ಸಂಸ್ಥಿಕ ಶಕ್ತಿಯನ್ನು ಹೊಂದಿರುವ ಪ್ರಭುದ್ದ ಸಂಸ್ಥೆಯಾಗಿ ಬೆಳಯಬಹುದೆಂಬ ನಿರೀಕ್ಷೆಗೆ ಮತ್ತೆ ನೀರೆರೆಯಬಹುದೇ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.

ಈ ಪ್ರಮುಖ ಮುನ್ನುಗ್ಗುತ್ತಿರುವ (ಎಮರ್ಜಿಂಗ್) ಆರ್ಥಿಕತೆಗಳು ತಮ್ಮ ನಡುವೆ ಬಾಂಧವ್ಯಗಳನ್ನು ಏರ್ಪಡಿಸಿಕೊಳ್ಳುವುದರಲ್ಲಿ ಒಂದು ಪರಿಕಲ್ಪನಾತ್ಮಕ ಉಪಯುಕ್ತತೆ ಇರಬಹುದು. ಆದರೆ ಈ ದೇಶಗಳ ವಿಭಿನ್ನ ವಿತ್ತೀಯ ಮತ್ತು ರಾಜಕೀಯ ವಾಸ್ತವತೆಗಳಿಂದಾಗಿ ಅಂಥಾ ಒಂದು ಬಾಂಧವ್ಯದ ಪ್ರಾಯೋಗಿಕ ಪರಿಣಾಮಕತೆಯ ವಿಷಯಗಳು ಮೊದಲಿಂದಲೂ ಗೊಂದಲದಿಂದಲೇ ಕೂಡಿತ್ತು. ಈ ವರ್ಷ ಬ್ರೆಜಿಲ್‌ನ ಹೊಸ ಅಧ್ಯಕ್ಷ ಬೊಲ್ಸನಾರೋ ಅವರ ಆಡಳಿತದಲ್ಲಿ ಬದಲಾಗಿರುವ ವಿದೇಶಾಂಗ ಆದ್ಯತೆಗಳೂ ಈಗಾಗಲೇ ಇದ್ದ ಗೊಂದಲಕ್ಕೆ ಮತ್ತಷ್ಟು ದ್ವಂದ್ವವನ್ನು ಸೇರಿಸಿವೆ. ಕಳೆದ ಒಂದುವರೆ ದಶಕದಿಂದ ಬ್ರೆಜಿಲ್‌ನ ವಿದೇಶಾಂಗ ನೀತಿಯು ಜಗತ್ತು ಯಾವುದೇ ಒಂದು ಶಕ್ತಿಯ ಅಧೀನದಲ್ಲಿರದಂಥ ಬಹುಧೃವ ತತ್ವವನ್ನು ಅನುಸರಿಸುತ್ತಾ ಬಂದಿತ್ತು. ಬೋಲ್ಸನಾರೋಗೆ ಹಿಂದಿದ್ದ ಆಡಳಿತವು ದಕ್ಷಿಣ ದೇಶಗಳ ಅಂದರೆ ಅಭಿವೃದ್ಧಿಶೀಲ ರಾಷ್ಟಗಳ ನಡುವಿನ ಹೆಚ್ಚಿನ ಸಹಕಾರಕ್ಕೆ ಒತ್ತುಕೊಡುವ ಬಹುಪಕ್ಷೀಯತೆಯನ್ನು ಪಾಲಿಸುವ ಮೂಲಕ ಬಹುಧೃವೀಕ್ರುತ ಜಗತ್ತಿನಲ್ಲಿ ಒಂದು ಸಮತೋಲನ ಹುಟ್ಟುಹಾಕುವ ಶಕ್ತಿಯ ಪಾತ್ರವನ್ನು ವಹಿಸುತ್ತಾ ಬಂದಿತ್ತು. ಆದರೆ ಬ್ರೆಜಿಲ್‌ನ ಹೊಸ ಆಡಳಿತವು ಈ ಬಹುಪಕ್ಷೀಯ ನೀತಿಯನ್ನು ಗಾಳಿಗೆ ತೂರಿ ಪಶ್ಚಿಮ ದೇಶಗಳ ಜೊತೆಗೆ ಅದರಲ್ಲೂ ಅಮೆರಿಕದೊಡನೆ ಲಾಭದಾಯಕ ಸಂಬಂಧಗಳನ್ನು ರೂಢಿಸಿಕೊಳ್ಳುವ ನೀತಿಯನ್ನು ಅಪ್ಪಿಕೊಂಡಿದೆ. ವಲಸೆಯ ಬಗ್ಗೆ ಇತ್ತೀಚೆಗೆ ಮಾಡಿಕೊಳ್ಳಲಾದ ಜಾಗತಿಕ ಒಡಂಬಡಿಕೆಯಿಂದ ಹಿಂದೆ ಸರಿದಿರುವ ಅಥವಾ ತನ್ನ ದಶಕದಷ್ಟು ಹಳೆಯ ವಾಣಿಜ್ಯ ಪಾಲುದಾರನಾದ ಚೀನಾದ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಸಂಘರ್ಷಾತ್ಮಕವಾಗಿಸಿಕೊಂಡಿರುವ, ಹಾಗೂ ವೆನೆಜುಯೇಲಾದ ಅಧ್ಯಕ್ಷ ನಿಕೋಲಸ ಮಾದುರೋ ಅವರನ್ನು ಪದಚ್ಯುತಗೊಳಿಸಲು ಅಮೆರಿಕದ ಸ್ವಘೋಷಿತ ರಾಜಕೀಯ/ಸೈನಿಕ ಮಧ್ಯಪ್ರವೇಶವನ್ನು ಬೆಂಬಲಿಸುತ್ತಿರುಂಥ ಮತ್ತು ಅಮೆರಿಕದ ಜಾಗತಿಕ ಮಹತ್ವಾಕಾಂಕ್ಷೆಯೊಂದಿಗೆ ಹೊಂದಿಕೊಂಡಿರುವ ಬ್ರೆಜಿಲನ ಬದಲಾದ ರಾಜತಾಂತ್ರಿಕ ನಡೆಗಳು ಅದನ್ನು ಬ್ರಿಕ್ಸ್ ಕೂಟದ ದುರ್ಬಲ ಕೊಂಡಿಯನ್ನಾಗಿ ಮಾಡಿದೆ.

Dear Reader,

To continue reading, become a subscriber.

Explore our attractive subscription offers.

Click here

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top